ಆ್ಯಸ್ಟ್ರಿಕ್ಸ್ ಮತ್ತು ಒಬಿಲಿಕ್ಸ್ಗೆ ಪ್ರೇಕ್ಷಕರು ಎಂಜಾಯ್ ಮಾಡಲೆಂದೇ ಥೇಟರಿಗೆ ಬರುತ್ತಾರೆ - 3.5/5 ****
Posted date: 13 Sat, May 2023 01:16:06 PM
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಾಲಿವುಡ್ ಚಿತ್ರಗಳ ಅಬ್ಬರ ಕಡಿಮೆಯಾಗುತ್ತಿದೆ. ಹೀಗಿರುವಾಗಲೇ, `ಆ್ಯಸ್ಟ್ರಿಕ್ಸ್ ಮತ್ತು ಒಬಿಲಿಕ್ಸ್` – ದಿ ಮಿಡಲ್ ಕಿಂಗ್ಡಮ್  ಎಂಬ ಇಂಗ್ಲೀಷ್ ಚಿತ್ರವೊಂದು ಮೇ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆ ಪಡೆಯುತ್ತಿದೆ.
 
ಆ್ಯಸ್ಟ್ರಿಕ್ಸ್ ಮತ್ತು ಒಬಿಲಿಕ್ಸ್ ಎಂಬ ಜನಪ್ರಿಯ ಕಾರ್ಟೂನ್ ಪಾತ್ರಗಳನ್ನಾಧರಿಸಿ ನಿರ್ಮಾಣ ಮಾಡಲಾಗಿರುವ `ಆ್ಯಸ್ಟ್ರಿಕ್ಸ್ ಮತ್ತು ಒಬಿಲಿಕ್ಸ್` – ದಿ ಮಿಡಲ್ ಕಿಂಗ್ಡಮ್’ ಚಿತ್ರವು ಮೂಲತಃ ಫ್ರೆಂಚ್ ಭಾಷೆಯಲ್ಲಿ ನಿರ್ಮಾಣವಾಗಿದ್ದು, ಇಂಗ್ಲೀಷ್ಗೆ ಡಬ್ ಆಗಿದೆ. ಭಾರತದಲ್ಲಿ ಇದೇ ಇಂಗ್ಲೀಷ್ ಚಿತ್ರವು ಬಿಡುಗಡೆಯಾಗಿದೆ.
 
ಆ್ಯಸ್ಟ್ರಿಕ್ಸ್ ಮತ್ತು ಒಬಿಲಿಕ್ಸ್ ಸರಣಿಯ ಐದನೇ ಚಿತ್ರ ಇದಾಗಿದ್ದು, ಇದೇ ಮೊದಲ ಬಾರಿಗೆ ಆ್ಯಸ್ಟ್ರಿಕ್ಸ್ ಮತ್ತು ಒಬಿಲಿಕ್ಸ್ ಕಾರ್ಟೂನ್ನ ಯಾವುದೇ ಕಥೆಯನ್ನೂ ಈ ಚಿತ್ರ ಆಧರಿಸಿಲ್ಲ. ಇದೊಂದು ಕಾಲ್ಪನಿಕ ಚಿತ್ರವಾಗಿದ್ದು, ದೂರದ ಚೀನಾದಿಂದ ಸಹಾಯ ಅಂಗಲಾಚಿ ಬರುವ ಒಬ್ಬ ರಾಜಕುಮಾರಿಗೆ ಆ್ಯಸ್ಟ್ರಿಕ್ಸ್ ಮತ್ತು ಒಬಿಲಿಕ್ಸ್ ಹೇಗೆ ನೆರವಾಗುತ್ತಾರೆ ಎಂಬುದನ್ನು ಮನರಂಜನಾತ್ಮಕವಾಗಿ ಹೇಳಲಾಗಿದೆ. 
ಆ್ಯಸ್ಟ್ರಿಕ್ಸ್ ಮತ್ತು ಒಬಿಲಿಕ್ಸ್ ಆಗಿ ಗಿಲಿಯಾಮ್ ಕ್ಯಾನೆಟ್ ಮತ್ತು ಗಿಲ್ಲೆಸ್ ಲಿಲ್ಲೋಚ್ ಅಭಿನಯಿಸಿದ್ದು, ಮಿಕ್ಕಂತೆ ವಿನ್ಸೆಂಟ್ ಕ್ಯಾಸಲ್, ಮ್ಯಾರಿಯನ್ ಕ್ಯಾಟಿಲಾರ್ಡ್, ಜೊನಥಾನ್ ಕೊಹೆನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಗಿಲಿಯಾಮ್ ಕ್ಯಾನೆಟ್ ನಿರ್ದೇಶನ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed